ಅಬಕಾರಿ ರಕ್ಷಕರು (ಪುರುಷ & ಮಹಿಳೆ)
ಶೈಕ್ಷಣಿಕ ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ
ವಯೋಮಿತಿ: 21 ರಿಂದ 26 ವರ್ಷಗಳು – ಸಾಮಾನ್ಯ ಅಭ್ಯರ್ಥಿಗಳಿಗೆ
21 ರಿಂದ 28 ವರ್ಷಗಳು – 2ಎ, 2ಬಿ, 3ಎ, 3ಬಿ
21 ರಿಂದ 28 ವರ್ಷಗಳು – ಪ.ಜಾತಿ, ಪ.ಪಂ. & ಪ್ರವರ್ಗ-1
ನೇಮಕಾತಿ ವಿಧಾನ: ಎರಡು ಹಂತಗಳಲ್ಲಿ: 1. ಲಿಖಿತ ಪರೀಕ್ಷೆ 2. ದೇಹದಾಢ್ರ್ಯತೆ
ಮತ್ತು ದೈಹಿಕ ಸಾಮಥ್ರ್ಯ ಅರ್ಹತಾ ಪರೀಕ್ಷೆ
1. ಲಿಖಿತ ಪರೀಕ್ಷೆ: ಪರೀಕ್ಷೆಯು ಎಸ್.ಎಸ್.ಎಲ್.ಸಿ. ಮಟ್ಟದಾಗಿದ್ದು 2 ಪತ್ರಿಕೆಗಳನ್ನು
ಒಳಗೊಂಡಿರುತ್ತದೆ.
ಪತ್ರಿಕೆ–1: ಸಾಮಾನ್ಯ ಜ್ಞಾನ – 150 ಅಂಕಗಳು – 2 ಗಂಟೆಗಳ ಅವಧಿ
ಪತ್ರಿಕೆ–2: ಸಾಮಾನ್ಯ ಕನ್ನಡ/ಇಂಗ್ಲೀಷ್ – 150 ಅಂಕಗಳು – 2 ಗಂಟೆಗಳ ಅವಧಿ
ಈ ಎರಡು ಪತ್ರಿಕೆಗಳು ವಸ್ತುನಿಷ್ಠ ಬಹು ಆಯ್ಕೆ ವಿಧಾನದಲ್ಲಿರುತ್ತದೆ. (Objective multiple choice types)
ಪಠ್ಯಕ್ರಮ: ಪತ್ರಿಕೆ-1: ಸಾಮಾನ್ಯ ಜ್ಞಾನ: ಭೂಗೋಳಶಾಸ್ತ್ರ, ಭಾರತದ ಇತಿಹಾಸ & ಸಂಸ್ಕøತಿ, ಸಂವಿಧಾನ,
ಸಾಮಾನ್ಯ ಅರ್ಥಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಿಕ ಜೀವನದಲ್ಲಿ ವಿಜ್ಞಾನ
ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.
ಪತ್ರಿಕೆ-2: ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲೀಷ್ ಪತ್ರಿಕೆಯಲ್ಲಿ ಕನ್ನಡ / ಇಂಗ್ಲೀಷ್ ವ್ಯಾಕರಣ ಶಬ್ದ ಸಂಪತ್ತು, ಕಾಗುಣಿತ, ಸಮನಾರ್ಥಕ ಪದಗಳು, ವಿರುದ್ಧಾರ್ಥಕ ಪದಗಳು ಇವುಗಳ ಪರಿಜ್ಞಾನ, ಕನ್ನಡ / ಇಂಗ್ಲೀಷ್ ಭಾಷೆಯನ್ನು ಅರಿಯುವ ಮತ್ತು ಗ್ರಹಿಸುವ ಶಕ್ತಿ ಮತ್ತು ಅದರ ಸರಿಯಾದ ಹಾಗೂ ತಪ್ಪು ಬಳಕೆಗಳನ್ನು ಪರಿಶೀಲಿಸುವ ಸಾಮಥ್ರ್ಯದ ಮೇಲೆ ಪ್ರಶ್ನೆಗಳಿರುತ್ತವೆ.
ಅಭ್ಯರ್ಥಿಗಳು ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲೀಷ್ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.
ಲಿಖಿತ ಪರೀಕ್ಷೆಯಲ್ಲಿನ ಅಂಶಗಳ ಆಧಾರದ ಮೇಲೆ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ 1:5ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ದೇಹದಾಢ್ರ್ಯತೆ ಮತ್ತು ದೈಹಿಕ ಸಾವiಥ್ರ್ಯ ಅರ್ಹತಾ ಪರೀಕ್ಷೆಗೆ ಕರೆಯಲಾಗುವುದು.
2. (ಎ) ದೇಹ ದಾಢ್ರ್ಯತೆ:
ಪುರುಷ ಅಭ್ಯರ್ಥಿಗಳಿಗೆ ಮಹಿಳಾ ಅಭ್ಯರ್ಥಿಗಳಿಗೆ
(ಎ) ಎತ್ತರ 163 ಸೆ.ಮೀ. 157 ಸೆ.ಮೀ.
(ಬಿ) ತೂಕ – 49.9 ಕಿ.ಗ್ರಾಂ.
(ಸಿ) ಎದೆಯ ಅಳತೆ 81 ಸೆ.ಮೀ. – ಉಸಿರು ಎಳೆದಾಗ 5 ಸೆ.ಮೀ. ಹೆಚ್ಚಳ ಅನ್ವಯಿಸುವುದಿಲ್ಲ
(ಬಿ) ದೈಹಿಕ ಅರ್ಹತಾ ಪರೀಕ್ಷೆ:
ಪುರುಷ / ಮಾಜಿ ಸೈನಿಕ ಮಹಿಳೆ
ಅಂಕ ಅರ್ಹತಾ ಸಮಯ/ದೂರ ಅಂಕ ಅರ್ಹತಾ ಸಮಯ/ದೂರ
1. 100 ಮೀ. ಓಟ 15 ಸೆಕೆಂಡುಗಳು 100 ಮೀ. ಓಟ 18.5 ಸೆಕೆಂಡುಗಳು
2. ಎತ್ತರ ಜಿಗಿತ 1.20 ಮೀಟರ್ ಎತ್ತರ ಜಿಗಿತ 0.9 ಮೀಟರ್
3. ಉದ್ದ ಜಿಗಿತ 3.80 ಮೀಟರ್ ಉದ್ದ ಜಿಗಿತ 2.50 ಮೀಟರ್
4. ಗುಂಡು ಎಸೆತ (7.26 ಕೆ.ಜಿ.) 5.60 ಮೀಟರ್ ಗುಂಡು ಎಸೆತ
(4 ಕೆ.ಜಿ.) 3.75 ಮೀಟರ್
5. 800 ಮೀಟರ್ ಓಟ 2 ನಿಮಿಷ 50 ಸೆಕೆಂಡು 200 ಮೀಟರ್ ಓಟ 40 ಸೆಕೆಂಡು
• ಅಭ್ಯರ್ಥಿಗಳು ಮೇಲಿನ 5 ದೈಹಿಕ ಸಾಮಥ್ಯಗಳ ಪೈಕಿ 3ರಲ್ಲಿ ಉತ್ತೀರ್ಣರಾಗಬೇಕು.
• ದೈಹಿಕ ಸಾಮಥ್ರ್ಯ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು ಮಾತ್ರ ಅವರು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗಾ, ಶಿವಮೊಗ್ಗ ಕೇಂದ್ರಗಳಲ್ಲಿ ಮತ್ತು
ಆಯೋಗ ನಿಗದಿಪಡಿಸುವ ಇತರೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಆನ್‍ಲೈನ್ ಮೂಲಕ
ಹೆಚ್ಚಿನ ಮಾಹಿತಿಗಾಗಿ: http://kpsc.kar.nic.in