Junior Assistant / Second Division Assistant

State Assistant

ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರು
ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ಪದವಿ ಪೂರ್ವ ಪರೀಕ್ಷೆ ಅಥವಾ ತತ್ಸಮಾನ ವಿದ್ಯಾರ್ಹತೆಗಳಾದ ಐಟಿಐ ಮತ್ತು ಇತರೆ ಮೂರು ವರ್ಷದ ಡಿಪ್ಲೊಮೋ ಕೋರ್ಸ್.

ವಯೋಮಿತಿ: 18 ರಿಂದ 35 ವರ್ಷಗಳು – ಸಾಮಾನ್ಯ ಅಭ್ಯರ್ಥಿಗಳಿಗೆ
18 ರಿಂದ 38 ವರ್ಷಗಳು – 2ಎ, 2ಬಿ, 3ಎ, 3ಬಿ
18 ರಿಂದ 40 ವರ್ಷಗಳು – ಪ.ಜಾತಿ, ಪ.ಪಂ. & ಪ್ರವರ್ಗ-1

ಪರೀಕ್ಷಾ ವಿಧಾನ: 3 ಪತ್ರಿಕೆಗಳು – ವಸ್ತುನಿಷ್ಠ ಬಹು ಆಯ್ಕೆಯ ವಿಧಾನದಲ್ಲಿರುತ್ತದೆ.
(ಔರಿeಛಿಣive muಟಣiಠಿಟe ಛಿhoiಛಿe ಣಥಿಠಿe)

ಪತ್ರಿಕೆ–1: ಸಾಮಾನ್ಯ ಕನ್ನಡ/ಇಂಗ್ಲೀಷ್ – 100 ಅಂಕಗಳು – 1ಳಿ ಗಂಟೆ ಅವಧಿ
ಪತ್ರಿಕೆ–2: ಸಾಮಾನ್ಯ ಜ್ಞಾನ – 100 ಅಂಕಗಳು – 1ಳಿ ಗಂಟೆ ಅವಧಿ
ಪತ್ರಿಕೆ-3: ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ- 80 ಅಂಕಗಳು – 1ಳಿ ಗಂಟೆ ಅವಧಿ

ಪಠ್ಯಕ್ರಮ: ಪದವಿ ಪೂರ್ವ ಪರೀಕ್ಷೆ ಅಥವಾ ತತ್ಸಮಾನ ವಿದ್ಯಾರ್ಹತೆಗಳಾದ ಐಟಿಐ ಮತ್ತು ಇತರೆ
ಮೂರು ವರ್ಷದ ಡಿಪ್ಲೊಮೋ ಕೋರ್ಸ್

ಪತ್ರಿಕೆ-1: ಭಾರತದ ಸಂವಿಧಾನ, ಭಾರತದ ಇತಿಹಾಸ ಮತ್ತು ಸಂಸ್ಕøತಿ, ಸಾಮಾನ್ಯ ಅರ್ಥಶಾಸ್ತ್ರ,
ಭೂಗೋಳಶಾಸ್ತ್ರ, ಇತ್ತೀಚಿನ ಘಟನೆಗಳು, ದೈನಂದಿನ ಜೀವನದಲ್ಲಿನ ವಿಜ್ಞಾನ
ವಿಷಯಗಳ ಮೇಲೆ ಪ್ರಶ್ನೆ ಇರುತ್ತದೆ.
ಪತ್ರಿಕೆ-2: ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲೀಷ್ ಪತ್ರಿಕೆಯಲ್ಲಿ ಕನ್ನಡ / ಇಂಗ್ಲೀಷ್
ವ್ಯಾಕರಣ, ಶಬ್ದ ಸಂಪತ್ತು, ಕಾಗುಣಿತ, ಸಮನಾರ್ಥಕ ಪದಗಳು, ವಿದುದ್ಧಾರ್ಥಕ
ಪದಗಳು ಇವುಗಳ ಪರಿಜ್ಞಾನ, ಕನ್ನಡ / ಇಂಗ್ಲೀಷ್ ಭಾಷೆಯನ್ನು ಅರಿಯುವ ಮತ್ತು
ಗ್ರಹಿಸುವ ಶಕ್ತಿ ಮತ್ತು ಅದರ ಸರಿಯಾದ ಹಾಗು ತಪ್ಪು ಬಳಕೆಗಳನ್ನು ಪರಿಶೀಲಿಸುವ
ಸಾಮಥ್ರ್ಯದ ಮೇಲೆ ಪ್ರಶ್ನೆಗಳಿರುತ್ತವೆ.

• ಅಭ್ಯರ್ಥಿಗಳು ಸಾಮಾನ್ಯ ಕನ್ನಡ / ಸಾಮಾನ್ಯ ಇಂಗ್ಲೀಷ್ ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.
• ಅಂತಿಮ ಆಯ್ಕೆಯು ಲಿಖಿತ ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳ ಆಧಾರದಲ್ಲಿ ಮಾಡಲಾಗುವುದು.

ಪರೀಕ್ಷಾ ಕೇಂದ್ರ: ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಆಯೋಗ ನಿಗದಿಪಡಿಸುವ ಇತರೆ ಕೇಂದ್ರಗಳಲ್ಲಿ
ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆನ್‍ಲೈನ್ ಮೂಲಕ

ಹೆಚ್ಚಿನ ಮಾಹಿತಿಗಾಗಿ: http://kpsc.kar.nic.in