ಪ್ರೌಢಶಾಲಾ ಶಿಕ್ಷಕರ ನೇಮಕಾತಿ
ಶೈಕ್ಷಣಿಕ ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಎ. ಬಿ.ಇಡಿ. / ಬಿ.ಎಸ್ಸಿ. ಬಿ.ಇಡಿ. /
ಬಿ.ಕಾಂ. ಬಿ.ಇಡಿ.
ವಯೋಮಿತಿ: 20 ರಿಂದ 40 ವರ್ಷಗಳು – ಸಾಮಾನ್ಯ ಅಭ್ಯರ್ಥಿಗಳಿಗೆ
20 ರಿಂದ 43 ವರ್ಷಗಳು – 2ಎ, 2ಬಿ, 3ಎ, 3ಬಿ
20 ರಿಂದ 45 ವರ್ಷಗಳು – ಪ.ಜಾತಿ, ಪ.ಪಂ. & ಪ್ರವರ್ಗ-1
ಆಯ್ಕೆ ವಿಧಾನ: ಲಿಖಿತ ಪರೀಕ್ಷೆಯು ವಸ್ತುನಿಷ್ಠ ಬಹು ಆಯ್ಕೆಯ ಮಾದರಿಯ 2 ಪತ್ರಿಕೆಗಳನ್ನು
ಹೊಂದಿರುತ್ತದೆ.
ಪತ್ರಿಕೆ–1: ಸಾಮಾನ್ಯ ಪತ್ರಿಕೆ: – 100 ಅಂಕಗಳು – 2 ಗಂಟೆಗಳ ಅವಧಿ
ಪಠ್ಯಕ್ರಮ: ಸಾಮಾನ್ಯ ಜ್ಞಾನ – 33 ಅಂಕಗಳು
ಶೈಕ್ಷಣಿಕ ಮನೋವಿಜ್ಞಾನ – 33 ಅಂಕಗಳು
ಮಾನಸಿಕ ಸಾಮಥ್ರ್ಯ – 34 ಅಂಕಗಳು
ಪತ್ರಿಕೆ–2: ನಿರ್ದಿಷ್ಟ ಪತ್ರಿಕೆ: – 100 ಅಂಕಗಳು – 2 ಗಂಟೆಗಳ ಅವಧಿ
2ನೇ ಪತ್ರಿಕೆ ಅಭ್ಯರ್ಥಿಗಳು ಅಧ್ಯಯನ ಮಾಡಿದ ಐಚ್ಛಿಕ ವಿಷಯಗಳಾಗಿರುತ್ತದೆ.
• ಭಾಷಾ ಶಿಕ್ಷಕರ ಹುದ್ದೆಗೆ – ಕನ್ನಡ/ಇಂಗ್ಲೀಷ್/ಉರ್ದು/ಮರಾಠಿ/ತಮಿಳು/ತೆಲುಗು
• ಕಲಾ ಶಿಕ್ಷಕರ ಹುದ್ದೆಗೆ – ಇತಿಹಾಸ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಪೌರನೀತಿ
• ಭೌತ ವಿಜ್ಞಾನ ಶಿಕ್ಷಕರ ಹುದ್ದೆಗೆ – ಭೌತಶಾಸ್ತ್ರ & ಗಣಿತಶಾಸ್ತ್ರ
• ಜೀವ ವಿಜ್ಞಾನ ಶಿಕ್ಷಕರ ಹುದ್ದೆಗೆ – ರಸಾಯನ ಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ
ಪರೀಕ್ಷಾ ಮಾಧ್ಯಮ: ಭಾಷಾ ವಿಷಯ ಹೊರತು ಪಡಿಸಿ ಇತರೆ ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳು
ಕನ್ನಡ & ಆಂಗ್ಲ ಭಾಷೆಯಲ್ಲಿರುತ್ತವೆ.
ಆಯ್ಕೆಯ ವಿಧಾನ: ಅಭ್ಯರ್ಥಿಯು ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳ ಶೇ.70
& ಬಿ.ಎ./ಬಿ.ಎಸ್ಸಿ./ಬಿ.ಕಾಂ. ಪದವಿ ಪರೀಕ್ಷೆಯ ಒಟ್ಟು ಅಂಕಗಳ ಶೇ.20 ಹಾಗು
ಬಿ.ಇಡಿ. ಪದವಿ ಪರೀಕ್ಷೆಯ ಒಟ್ಟು ಅಂಕಗಳ ಶೇ.10. ಈ 3 ಒಟ್ಟು ಅಂಕಗಳ ಮೇಲೆ
ಮೆರಿಟ್ ಪಟ್ಟಿ ತಯಾರಿಸಿ ಪ್ರಚಲಿತ ಮೀಸಲಾತಿ ನಿಯಮಗಳ ಅನ್ವಯ ಆಯ್ಕೆ
ಮಾಡಲಾಗುವುದು.
ವಿಭಾಗ ಮಟ್ಟದ ಆಯ್ಕೆ: 1. ಬೆಂಗಳೂರು 2. ಮೈಸೂರು
3. ಗುಲ್ಪರ್ಗಾ 4. ಬೆಳಗಾವಿ
ಅರ್ಜಿ ಸಲ್ಲಿಸುವ ವಿಧಾನ: ಆನ್‍ಲೈನ್ ಮೂಲಕ
ಹೆಚ್ಚಿನ ಮಾಹಿತಿಗಾಗಿ: www.schooleducation.kar.nic.in