Karnataka Administrative Service

KAS

KPSC Notification :: View PDF File

ಶೈಕ್ಷಣಿಕ ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದ ಯಾವುದೇ ದರ್ಜೆಯ ಪದವಿ

ವಯೋಮಿತಿ: 21 ರಿಂದ 37 ವರ್ಷಗಳು – ಸಾಮಾನ್ಯ ಅಭ್ಯರ್ಥಿಗಳಿಗೆ
21 ರಿಂದ 40 ವರ್ಷಗಳು – 2ಎ, 2ಬಿ, 3ಎ, 3ಬಿ
21 ರಿಂದ 42 ವರ್ಷಗಳು – ಪ.ಜಾತಿ, ಪ.ಪಂ. & ಪ್ರವರ್ಗ-1

ಪ್ರಯತ್ನಗಳು: ಸಾಮಾನ್ಯ ಅಭ್ಯರ್ಥಿಗಳಿಗೆ – 7 ಬಾರಿ
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 9 ಬಾರಿ
ಪ.ಜಾತಿ, ಪ.ಪಂ. & ಪ್ರವರ್ಗ-1 – ಮಿತಿ ಇರುವುದಿಲ್ಲ

ಆಯ್ಕೆ ವಿಧಾನ: ಪರೀಕ್ಷೆಯು 3 ಹಂತಗಳಲ್ಲಿ ನಡೆಯುತ್ತದೆ

ಹಂತ–1: ಪೂರ್ವಭಾವಿ ಪರೀಕ್ಷೆ: ವಸ್ತುನಿಷ್ಠ ಬಹು ಆಯ್ಕೆಯ 2 ಪತ್ರಿಕೆಗಳನ್ನು ತಲಾ 200
ಅಂಕಗಳಾಗಿದ್ದು 2 ಗಂಟೆಗಳ ಕಾಲಾವಧಿಯಾಗಿರುತ್ತದೆ. (2 ಪತ್ರಿಕೆಗಳಿಗೆ ಒಟ್ಟು
400 ಅಂಕಗಳಿರುತ್ತವೆ)

ಪ್ರಶ್ನೆ ಪತ್ರಿಕೆ ಕನ್ನಡ & ಇಂಗ್ಲೀಷ್ ಭಾಷೆಗಳೆರಡರಲ್ಲೂ ಇರುತ್ತದೆ.

ಪ್ರಕಟಿತ ಸ್ಥಾನಗಳಿಗೆ ಅನುಗುಣವಾಗಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:20 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಹಂತ–2: ಮುಖ್ಯ ಪರೀಕ್ಷೆ (ವಿವರಣಾತ್ಮಕ ಪರೀಕ್ಷೆ) ಮತ್ತು ವ್ಯಕ್ತಿತ್ವ ಪರೀಕ್ಷೆ

ಮುಖ್ಯ ಪರೀಕ್ಷೆ: ಕಡ್ಡಾಯ ಪರೀಕ್ಷೆಯ 2 ಪತ್ರಿಕೆಗಳು

1 ಕಡ್ಡಾಯ ಕನ್ನಡ 150 ಅಂಕಗಳು – 2 ಗಂಟೆ
2 ಕಡ್ಡಾಯ ಇಂಗ್ಲೀಷ್ 150 ಅಂಕಗಳು – 2 ಗಂಟೆ
ಒಟ್ಟು 300 ಅಂಕಗಳು

ಮೇಲ್ಕಂಡ 2 ಪತ್ರಿಕೆಗಳು ಅರ್ಹತಾದಾಯಕ ಪತ್ರಿಕೆಗಳಾಗಿದ್ದು, ಅರ್ಹತೆ ಪಡೆಯಲು ಪ್ರತಿ ಪತ್ರಿಕೆಯಲ್ಲಿ ತಲಾ ಶೇ. 35 ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ರ್ಯಾಂಕ್‍ಗೆ ಪರಿಗಣಿಸಲಾಗುವುದಿಲ್ಲ.

ಅಭ್ಯರ್ಥಿಗಳ ಆಯ್ಕೆಯ ಅರ್ಹತಾ ಪತ್ರಿಕೆಗಳು:
ಪತ್ರಿಕೆ – 1: ಪ್ರಬಂಧ (ಎರಡು ಪ್ರಬಂಧಗಳು ತಲಾ 125 ಅಂಕಗಳು) 250 ಅಂಕಗಳು – 3 ಗಂಟೆ
ಪ್ರಬಂಧ – 1: ಅಂತರಾಷ್ಟ್ರೀಯ / ರಾಷ್ಟ್ರೀಯ ವಿಷಯಗಳು
ಪ್ರಬಂಧ – 2: ರಾಜ್ಯ / ಸ್ಥಳೀಯ ವಿಷಯಗಳು
ಪತ್ರಿಕೆ – 2: ಸಾಮಾನ್ಯ ಅಧ್ಯಯನ ಪತ್ರಿಕೆ – 1 250 ಅಂಕಗಳು – 3 ಗಂಟೆ
ಪತ್ರಿಕೆ – 3: ಸಾಮಾನ್ಯ ಅಧ್ಯಯನ ಪತ್ರಿಕೆ – 2 250 ಅಂಕಗಳು – 3 ಗಂಟೆ
ಪತ್ರಿಕೆ – 4: ಸಾಮಾನ್ಯ ಅಧ್ಯಯನ ಪತ್ರಿಕೆ – 3 250 ಅಂಕಗಳು – 3 ಗಂಟೆ
ಪತ್ರಿಕೆ – 5: ಸಾಮಾನ್ಯ ಅಧ್ಯಯನ ಪತ್ರಿಕೆ – 4 250 ಅಂಕಗಳು – 3 ಗಂಟೆ
ಪತ್ರಿಕೆ – 6: ಐಚ್ಛಿಕ ವಿಷಯ-1 ಪತ್ರಿಕೆ – 1 250 ಅಂಕಗಳು – 3 ಗಂಟೆ
ಪತ್ರಿಕೆ – 7: ಐಚ್ಛಿಕ ವಿಷಯ-1 ಪತ್ರಿಕೆ – 2 250 ಅಂಕಗಳು – 3 ಗಂಟೆ
ಒಟ್ಟು 1750 ಅಂಕಗಳು

ಹಂತ-3: ವ್ಯಕ್ತಿತ್ವ ಪರೀಕ್ಷೆ: ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆ ಮತ್ತು ಹುದ್ದೆಗಳ ಸಂಖ್ಯೆಗೆ
ಅನುಗುಣವಾಗಿ 1:5 ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ
ಮಾಡಲಾಗುವುದು. ವ್ಯಕ್ತಿತ್ವ ಪರೀಕ್ಷೆಗೆ – 200 ಅಂಕಗಳು.

ಅಭ್ಯರ್ಥಿಗಳ ಆಯ್ಕೆ ಪಟ್ಟಿ: ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ ಪಡೆದ ಒಟ್ಟು
ಅಂಕಗಳ ಆಧಾರದ ಮೇಲೆ ಆಯ್ಕೆ.

ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗಾ ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ
ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆನ್‍ಲೈನ್ ಮೂಲಕ

ಹೆಚ್ಚಿನ ಮಾಹಿತಿಗಾಗಿ: http://kpsc.kar.nic.in