ಪ್ರೌಢಶಾಲಾ ಮುಖ್ಯೋಪಾಧ್ಯಾಯರ ನೇಮಕಾತಿ
ಶೈಕ್ಷಣಿಕ ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿ.ಎ. ಬಿ.ಇಡಿ. / ಬಿ.ಎಸ್ಸಿ. ಬಿ.ಇಡಿ. /
ಬಿ.ಕಾಂ. ಬಿ.ಇಡಿ.
ವಯೋಮಿತಿ: 18 ರಿಂದ 35 ವರ್ಷಗಳು – ಸಾಮಾನ್ಯ ಅಭ್ಯರ್ಥಿಗಳಿಗೆ
18 ರಿಂದ 38 ವರ್ಷಗಳು – 2ಎ, 2ಬಿ, 3ಎ, 3ಬಿ
18 ರಿಂದ 40 ವರ್ಷಗಳು – ಪ.ಜಾತಿ, ಪ.ಪಂ. & ಪ್ರವರ್ಗ-1
ಆಯ್ಕೆ ವಿಧಾನ: ಪರೀಕ್ಷೆಯು 3 ಹಂತದಲ್ಲಿ ನಡೆಯುತ್ತದೆ.
ಹಂತ–1: ಪೂರ್ವಭಾವಿ ಪರೀಕ್ಷೆ: ವಸ್ತುನಿಷ್ಠ ಬಹು ಆಯ್ಕೆ ಮಾದರಿಯ 2 ಪತ್ರಿಕೆಗಳು
ಪತ್ರಿಕೆ–1: ಸಾಮಾನ್ಯ ಅಧ್ಯಯನ: – 150 ಅಂಕಗಳು – 2 ಗಂಟೆಗಳ ಅವಧಿ
ಪಠ್ಯಕ್ರಮ: ಸಾಮಾನ್ಯ ವಿಜ್ಞಾನ, ರಾಜ್ಯ, ರಾಷ್ಟ್ರೀಯ & ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು,
ಪ್ರಾಪಂಚಿಕ ಭೂಗೋಳಶಾಸ್ತ್ರ, ಭಾರತದ ಇತಿಹಾಸ, ಭಾರತದ ರಾಜ್ಯಶಾಸ್ತ್ರ & ಅರ್ಥಶಾಸ್ತ್ರ,
ಭಾರತದ ರಾಷ್ಟ್ರೀಯ ಚಳುವಳಿ & ಸಾಮಾನ್ಯ ಮಾನಸಿಕ ಸಾಮಥ್ರ್ಯ.
ಪತ್ರಿಕೆ–2: ಶಿಕ್ಷಣ (3 ಭಾಗಗಳು): – 300 ಅಂಕಗಳು – 3 ಗಂಟೆಗಳ ಅವಧಿ
ಭಾಗ – 1: ಶೈಕ್ಷಣಿಕ ಆಡಳಿತ – 100 ಅಂಕಗಳು
ಭಾಗ – 2: ಶೈಕ್ಷಣಿಕ ಮನೋವಿಜ್ಞಾನದ
ಮೂಲ ತತ್ವಗಳು – 100 ಅಂಕಗಳು
ಭಾಗ – 3: ಇತ್ತೀಚಿನ ಕರ್ನಾಟಕ ಶೈಕ್ಷಣಿಕ
ಹೊಸ ಪಠ್ಯಕ್ರಮಗಳು – 100 ಅಂಕಗಳು
ಪ್ರಕಟಿತ ಸ್ಥಾನಗಳಿಗೆ ಅನುಗುಣವಾಗಿ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:20 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹಂತ–2: ಮುಖ್ಯ ಪರೀಕ್ಷೆ (ವಿವರಣಾತ್ಮಕ ಪರೀಕ್ಷೆ)
ಮುಖ್ಯ ಪರೀಕ್ಷೆ: 8 ಪತ್ರಿಕೆಗಳು – 2100 ಅಂಕಗಳು
ಪತ್ರಿಕೆ–1: ಕಡ್ಡಾಯ ಕನ್ನಡ – 150 ಅಂಕಗಳು – 3 ಗಂಟೆಗಳ ಅವಧಿ
ಪತ್ರಿಕೆ–2: ಕಡ್ಡಾಯ ಇಂಗ್ಲೀಷ್ – 150 ಅಂಕಗಳು – 3 ಗಂಟೆಗಳ ಅವಧಿ
ಒಟ್ಟು – 300 ಅಂಕಗಳು
ಮೇಲ್ಕಂಡ 2 ಪತ್ರಿಕೆಗಳು ಅರ್ಹತಾದಾಯಕ ಪತ್ರಿಕೆಗಳಾಗಿದ್ದು, ಎಸ್.ಎಸ್.ಎಲ್.ಸಿ. ಮಟ್ಟದಲ್ಲಿದ್ದು, ಅರ್ಹತೆ ಪಡೆಯಲು ಪ್ರತಿ ಪತ್ರಿಕೆಯಲ್ಲಿ ಕನಿಷ್ಠ ಶೇ. 30 ಮತ್ತು ಸರಾಸರಿ ಶೇ.35 ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಅಭ್ಯರ್ಥಿಗಳ ಆಯ್ಕೆಯ ಅರ್ಹತಾ ಪತ್ರಿಕೆಗಳು:
ಪತ್ರಿಕೆ–3: ಸಾಮಾನ್ಯ ಅಧ್ಯಯನ – 300 ಅಂಕಗಳು – 3 ಗಂಟೆಗಳ ಅವಧಿ
ಪತ್ರಿಕೆ–4: ಶಿಕ್ಷಣ – 300 ಅಂಕಗಳು – 3 ಗಂಟೆಗಳ ಅವಧಿ
ಪತ್ರಿಕೆ–5: ಪ್ರಥಮ ಐಚ್ಛಿಕ ವಿಷಯ ಪತ್ರಿಕೆ–1 – 300 ಅಂಕಗಳು – 3 ಗಂಟೆಗಳ ಅವಧಿ
ಪತ್ರಿಕೆ–6: ಪ್ರಥಮ ಐಚ್ಛಿಕ ವಿಷಯ ಪತ್ರಿಕೆ-2 – 300 ಅಂಕಗಳು – 3 ಗಂಟೆಗಳ ಅವಧಿ
ಪತ್ರಿಕೆ–7: ದ್ವಿತೀಯ ಐಚ್ಛಿಕ ವಿಷಯ ಪತ್ರಿಕೆ-1 – 300 ಅಂಕಗಳು – 3 ಗಂಟೆಗಳ ಅವಧಿ
ಪತ್ರಿಕೆ–8: ದ್ವಿತೀಯ ಐಚ್ಛಿಕ ವಿಷಯ ಪತ್ರಿಕೆ-2 – 300 ಅಂಕಗಳು – 3 ಗಂಟೆಗಳ ಅವಧಿ
ರ್ಯಾಂಕ್ಗೆ ಪರಿಗಣಿಸಲಾಗುವ ಅಂಕಗಳು – ಒಟ್ಟು-1800 ಅಂಕಗಳು
• ಮುಖ್ಯ ಪರೀಕ್ಷೆಗೆ 30 ಐಚ್ಛಿಕ ವಿಷಯಗಳನ್ನು ನಿಗದಿಪಡಿಸಿದೆ.
• ಮುಖ್ಯ ಪರೀಕ್ಷೆಯು ಪದವಿ ಮಟ್ಟದ್ದಾಗಿದ್ದು ವಿವರಣಾತ್ಮಕ ಮಾದರಿಯಲ್ಲಿರುತ್ತದೆ.
ಹಂತ–3: ವ್ಯಕ್ತಿತ್ವ ಪರೀಕ್ಷೆ: ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಜೇಷ್ಠತೆ & ಹುದ್ದೆಗಳ ಸಂಖ್ಯೆಗೆ
ಅನುಗುಣವಾಗಿ 1:3 ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ
ಮಾಡಲಾಗುವುದು.
• ವ್ಯಕ್ತಿತ್ವ ಪರೀಕ್ಷೆಗೆ – 200 ಅಂಕಗಳು
ಅಭ್ಯರ್ಥಿಗಳ ಆಯ್ಕೆ ಪಟ್ಟಿ: ಅಭ್ಯರ್ಥಿಗಳು ಮುಖ್ಯ ಪರೀಕ್ಷೆ & ವ್ಯಕ್ತಿತ್ವ ಪರೀಕ್ಷೆಯಲ್ಲಿ ಪಡೆದ ಒಟ್ಟು
ಅಂಕಗಳ ಆಧಾರದ ಮೇಲೆ ಆಯ್ಕೆ.
ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗಾ ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ
ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
ಹೆಚ್ಚಿನ ಮಾಹಿತಿಗಾಗಿ: http://kpsc.kar.nic.in